+91-9886642472 contact@suggifriendshome.in

ಸುಗ್ಗಿ ಸ್ನೇಹಿತರ ಮನೆಗೆ ಸುಸ್ವಾಗತ

ಈ ವಿಶಾಲ ಮನೆ ಇಂದು ನಮ್ಮ ಭವಿಷ್ಯದ ತಲೆಮಾರಿಗೆ ಸುರಕ್ಷಿತ, ಪ್ರೀತಿಪೂರ್ಣ ಮತ್ತು ಗೌರವಯುತ ಜೀವನವನ್ನು ನೀಡುವ ಉದ್ದೇಶದಿಂದ ನಿರ್ಮಿಸಲಾಗಿದೆ. ಜೀವನದ ಕಹಿ ಅನುಭವಗಳಿಂದ ರೂಪುಗೊಂಡು, ದೇವರ ಕೃಪೆಯಿಂದ ಶಾಂತಿ ಮತ್ತು ಆರೈಕೆಯನ್ನು ಪ್ರತಿಯೊಬ್ಬರೂ ಪಡೆಯಬೇಕೆಂಬ ನಂಬಿಕೆಯೇ ಇದರ ಮೂಲವಾಗಿದೆ—ವಿಶೇಷವಾಗಿ ಸಹಾಯ ಅಗತ್ಯವಿರುವವರಿಗಾಗಿ.

ಹಿಂದಿನ ದಿನಗಳಲ್ಲಿ ಸಂಯುಕ್ತ ಕುಟುಂಬ ಪದ್ಧತಿಯಲ್ಲಿ ಜೀವನ ಶಾಂತಿ ಮತ್ತು ಭದ್ರತೆಯಿಂದ ತುಂಬಿರುತ್ತಿತ್ತು. ಪ್ರೀತಿ, ಬಾಂಧವ್ಯ ಮತ್ತು ಒಗ್ಗಟ್ಟಿನಿಂದ ಮನೆಗಳು ಉಸಿರಾಡುತ್ತಿತ್ತು. ಅಲ್ಲಿ ಒಂಟಿತನ ಇರಲಿಲ್ಲ, ಬೇಸರ ಇರಲಿಲ್ಲ, ಎಲ್ಲೆಡೆ ಸುರಕ್ಷತೆ ಮತ್ತು ಪ್ರೀತಿ ಮಾತ್ರವಿತ್ತು.

ಈ ಮನೆ ಒಂದು ವಸುದೈವ ಕುಟುಂಬಕಂ ಎಂಬ ಧ್ಯೇಯ ವಾಕ್ಯದೊಂದಿಗೆ ರೂಪುಗೊಂಡ ಮತ್ತು ಅದನ್ನೇ ಅಳವಡಿಸಿಕೊಂಡು ಕಾರ್ಯನಿರ್ವಹಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದ್ದು, ಸಂಪ್ರದಾಯಿಕ ಕುಟುಂಬದ ಪ್ರೀತಿ, ಭದ್ರತೆ ಮತ್ತು ಆರೈಕೆಯನ್ನು ಪುನಃ ಅನುಭವಿಸುವ ವಾತಾವರಣವನ್ನು ಸೃಷ್ಟಿಸುವುದು ಇದರ ಧ್ಯೇಯವಾಗಿದೆ. ಇದು ಕೇವಲ ವಾಸಿಸುವ ಸ್ಥಳವಲ್ಲ—ಇದು ಕರುಣೆ, ಆರೈಕೆ ಮತ್ತು ಭರವಸೆಯೊಂದಿಗೆ ಜೀವನಕ್ಕೆ ಹೊಸ ದಿಕ್ಕು ನೀಡುವ ಮನೆ.

ಕನಸು

ಹಿಂದಿನ ಕಾಲದ ಅವಿಭಕ್ತ ಕುಟುಂಬದಲ್ಲಿ ಹೀಗೆ ಮನಶಾಂತಿ ಜೀವನದ ಭದ್ರತೆ ತುಂಬಿದ ಕುಟುಂಬ ಹಿರಿಯರಿಗೂ ಹಾಗೂ ಹಿರಿಯರಿಗೂ ಒಂಟಿತನವೇ ಇರಲಿಲ್ಲ, ಬೇಸರವಿರಲಿಲ್ಲ, ಎಲ್ಲೆಲ್ಲೂ ಭದ್ರತೆ ಪ್ರೀತಿ ತುಂಬಿತ್ತು.

ಆದರೆ ಇಂದು ಛಿದ್ರ ಕುಟುಂಬ, ಮನಸ್ತಾಪ ಅಭದ್ರತೆ, ಅಸಹಾಯಕತೆ ತಾಂಡವಾಡುತ್ತಿದ್ದು ಹಣವಿದ್ದರೂ ಸುಖ ನೆಮ್ಮದಿ ಇಲ್ಲದೇ ಇರುವಾಗ ನಾ ಕಂಡ ಪರಿಹಾರ ಈ ಮನೆ